
ಮೂಡಬಿದ್ರೆ ತಾಲೂಕು ಅಲಂಗಾರ್ ಉಳಿಯ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ದಂಪತಿಯ ಪುತ್ರ
ಚಿ || ಕಿರಣ್ ಕುಮಾರ್
ಕಡಬ ತಾಲೂಕು ಪೆರ್ಲದ ಕೆರೆ ಶ್ರೀ ದಿ. ಅಶೋಕ್ ಭಂಡಾರಿ ಮತ್ತು ಶ್ರೀಮತಿ ಜಯಂತಿ ಅಶೋಕ್ ಭಂಡಾರಿ ದಂಪತಿಯ ಪುತ್ರಿ
ಚಿ || ಸೌ|| ಪ್ರಾಪ್ತಿ
ಇವರು ಡಿಸೆಂಬರ್ 9 ನೇ ಬುಧವಾರದಂದು ಮೂಡಬಿದ್ರೆ ಒಂಟಿಕಟ್ಟೆಯ ಸೃಷ್ಟಿ ಗಾರ್ಡನ್ ನಲ್ಲಿ ದಾಂಪತ್ಯ ಜೀವನದ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮಂಗಳ ವಾದ್ಯದೊಂದಿಗೆ ಬಂಧು ಮಿತ್ರರು ಕುಟುಂಬಸ್ಥರ ಶುಭಾಶೀರ್ವಾದದೊಂದಿಗೆ ವರನು ವಧುವಿಗೆ ಮಂಗಳಸೂತ್ರವನ್ನು ಕಟ್ಟಿದರು.
ನವದಂಪತಿಯು ಆರೋಗ್ಯ ಸುಖ ಸಂಪತ್ತು ಪ್ರೀತಿ ಮಮತೆಯಿಂದ ಬಾಳಿ ಮಾದರಿ ಸಂಸಾರವನ್ನು ಸಾಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಶುಭ ಹಾರೈಸುತ್ತದೆ.
–ಭಂಡಾರಿ ವಾರ್ತೆ