
ಸುರತ್ಕಲ್ ನಾಜೂಕ್ ಟಚ್ ನ ಶ್ರೀ ಕುಶಲ್ ಬಿ. ಭಂಡಾರಿ ಮತ್ತು ಶ್ರೀಮತಿ ಶಾಂತಿ ಕುಶಲ್ ಭಂಡಾರಿ ದಂಪತಿಯ ಪುತ್ರ ಚಿ॥ ತೇಜಸ್ವಿ .ಕೆ. ಹಾಗೂ ಸುರತ್ಕಲ್ ತಡಂಬೈಲ್ ಶ್ರೀಮತಿ ಕುಸುಮ ಟೀಚರ್ ಮತ್ತು ಶ್ರೀ ತಿಮ್ಮಪ್ಪ ಭಂಡಾರಿ ದಂಪತಿಯ ಪುತ್ರಿ ಚಿ॥ಸೌ॥ ಶ್ರೀನಿಧಿ ಇವರ ಶುಭ ವಿವಾಹವು ಏಪ್ರಿಲ್ 11ರ ಬುಧವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದೇವಿಯ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು.ಅದೇ ದಿನ ರಾತ್ರಿ ಸುರತ್ಕಲ್ ನ ಬಂಟರ ಭವನದಲ್ಲಿ ಔತಣ ಕೂಟವನ್ನು ಏರ್ಪಡಿಸಲಾಗಿತ್ತು.
ವಿವಾಹ ಕಾರ್ಯಕ್ರಮಕ್ಕೆ ಮತ್ತು ಔತಣ ಕೂಟಕ್ಕೆ ಆಗಮಿಸಿದ ಸಮಾಜ ಭಾಂದವರು,ಗುರು ಹಿರಿಯರು,ಕುಟುಂಬಸ್ಥರು, ಜನ ಪ್ರತಿನಿಧಿಗಳು ಮತ್ತು ತೇಜಸ್ವಿಯವರು ಕಾರ್ಯನಿರ್ವಹಿಸುತ್ತಿರುವ ಸುರತ್ಕಲ್ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಸಹೋದ್ಯೋಗಿ ಮಿತ್ರರು ಪ್ರೀತಿಪೂರ್ವಕವಾಗಿ ಶುಭ ಹಾರೈಸಿದರು.
ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ,ಭಗವಂತನು ಸಕಲಷ್ಠೈಶ್ವರ್ಯಗಳನ್ನೂ ಕರುಣಿಸಿ ಸನ್ಮಂಗಳವನ್ನುಂಟುಮಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವದಂಪತಿಗಳಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ