
ಸುರತ್ಕಲ್ ಚೊಕ್ಕಬೆಟ್ಟುವಿನ ದಿವಂಗತ ಕರಿಯ ಭಂಡಾರಿ ಮತ್ತು ರಾಜೀವಿ ಕರಿಯ ಭಂಡಾರಿ ದಂಪತಿಯ ಪುತ್ರ…
ಚಿ|| ಪಾಂಡುರಂಗ
ಮತ್ತು ಕಾರ್ಕಳ ನಕ್ರೆಯ ಶ್ರೀ ವಿಜಯ ಭಂಡಾರಿ ಮತ್ತು ಶ್ರೀಮತಿ ಮೀನಾಕ್ಷಿ ವಿಜಯ ಭಂಡಾರಿ ದಂಪತಿಯ ಪುತ್ರಿ…
ಚಿ||ಸೌ|| ಜಯಶ್ರೀ
ಯವರ ವಿವಾಹ ಸಮಾರಂಭ ಸುರತ್ಕಲ್ ಬಂಟರ ಭವನದಲ್ಲಿ ಜೂನ್ 21 ರ ಗುರುವಾರ ಅತೀ ವಿಜೃಂಭಣೆಯಿಂದ ನೆರವೇರಿತು.
ಈ ಶುಭ ಸಮಾರಂಭದಲ್ಲಿ ಉಪಸ್ಥಿತರಿದ್ದ ಕುಟುಂಬಸ್ಥರು,ಬಂಧು ಬಾಂಧವರು,ಆತ್ಮೀಯರು,ಸುರತ್ಕಲ್ ಮತ್ತು ಕಾರ್ಕಳದ ಭಂಡಾರಿ ಬಂಧುಗಳು ನವವಧುವರರಿಗೆ ಶುಭ ಹಾರೈಸಿ,ಸವಿ ಭೋಜನ ಸವಿದು ಆಶೀರ್ವದಿಸಿದರು.
ಹೊಸಬಾಳಿಗೆ ನಸುನಗುತ್ತಾ ಪಾದಾರ್ಪಣೆಗೈದ ನವಜೋಡಿಗೆ ಭಗವಂತನು ಸಕಲಷ್ಠೈಶ್ವರ್ಯಗಳನ್ನೂ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಮದುವೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ