
ಉಡುಪಿ ತಾಲ್ಲೂಕು ಕಲ್ಯಾಣಪುರ ಶ್ರೀ ದಿವಂಗತ ಸಂಜೀವ ಭಂಡಾರಿ ಮತ್ತು ಮುಂಬೈನ ಕಲ್ಯಾಣ್ ಪಶ್ಚಿಮದ ಶ್ರೀಮತಿ ಸುನಂದಾ ಸಂಜೀವ ಭಂಡಾರಿ ದಂಪತಿಯ ಪುತ್ರ
ಚಿ॥ ರಮೇಶ
ಪುತ್ತೂರು ತಾಲ್ಲೂಕು ನೆಲ್ಲಿಕಟ್ಟೆ ಶ್ರೀ ಬಿ. ಎಸ್. ಸತೀಶ್ ಮಡಿಕೇರಿ ಮತ್ತು ಶ್ರೀಮತಿ ಹೀರಾ ಸತೀಶ್ ದಂಪತಿಯ ಪುತ್ರಿ
ಚಿ॥ ಸೌ॥ ವಿನಿಶ
ಇವರ ದಾಂಪತ್ಯ ಜೀವನದ ಸಪ್ತಪದಿಯನ್ನು ಅಗ್ನಿಸಾಕ್ಷಿಯಾಗಿ ತುಳಿದು ಜನವರಿ 6ನೇ ಬುಧವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ
ಶ್ರೀ ಸೌಂದರ್ಯ ಸಭಾಭವನದಲ್ಲಿ ಬಂಧು ಮಿತ್ರರ ಗುರುಹಿರಿಯರ ಕುಟುಂಬಸ್ಥರ ಆಶೀರ್ವಾದದೊಂದಿಗೆ ಶುಭ ವಿವಾಹ ವಿಜ್ರಂಭಣೆಯಿಂದ ನಡೆಯಿತು.
ನವದಂಪತಿ ನೂರಾರು ಕಾಲ ಆರೋಗ್ಯ ಆಯುಷ್ಯ ಸುಖ ಸಂಪತ್ತು ಅನ್ಯೋನ್ಯತೆಯಿಂದ ಸಂಸಾರ ಸಾಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.
-ಭಂಡಾರಿ ವಾರ್ತೆ