
ಬಂಟ್ವಾಳ ತಾಲೂಕು ನಂದೊಟ್ಟು ದಿವಂಗತ ಶ್ರೀ ಅಣ್ಣು ಭಂಡಾರಿ ಮತ್ತು ರಾಯಿ ದಿವಂಗತ ಶ್ರೀಮತಿ ಶಶಿದೇವಿ ದಂಪತಿಯ ಪುತ್ರ
ಚಿ॥ ಸುಧೀಂದ್ರ
ಮಂಗಳೂರು ತಾಲೂಕು ಅಮ್ಮೆಂಬಳ ( ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ) ದಿವಂಗತ ಶ್ರೀ ವಾಸುದೇವ ಭಂಡಾರಿ ಮತ್ತು ಕದ್ರಿ ಶ್ರೀಮತಿ ಶಾಲಿನಿ ವಾಸುದೇವ ಭಂಡಾರಿ ದಂಪತಿಯ ಪುತ್ರಿ
ಚಿ ॥ ಸೌ ॥ ನಮ್ರತಾ

ಇವರ ವಿವಾಹದ ನಿಶ್ಚಿತಾರ್ಥ ವನ್ನು ಜನವರಿ ತಿಂಗಳ 23 ನೇ ಗುರುವಾರದಂದು ಬಂಟ್ವಾಳದ ನೂತನ ಭಂಡಾರಿ ಸಭಾಭವನದಲಿ ಭಂಡಾರಿ ಸಮಾಜದ ಬಂದುಗಳ ಪ್ರಪ್ರಥಮ ಕಾರ್ಯಕ್ರಮ ಶುಭ ವಿವಾಹದ ನಿಶ್ಚಿತಾರ್ಥ ಪೂರೈಸಿದ ಹೆಗ್ಗಳಿಕೆಗೆ ಪಾತ್ರರಾದರು. ಬಂಟ್ವಾಳ ಭಂಡಾರಿ ಸಮಾಜದ ಪ್ರಮುಖರು ಬಂದು ಮಿತ್ರರು ಕುಟುಂಬಸ್ಥರು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.

ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂತೃಪ್ತಿಯ ಜೀವನವನ್ನು ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿವಾರ್ತೆ