ಉಡುಪಿ ತಾಲೂಕು ಕೊರಂಗ್ರಪಾಡಿ ಶ್ರೀ ಪಳ್ಳಿ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸಬಿತ ಬಾಲಕೃಷ್ಣ ಭಂಡಾರಿ ದಂಪತಿಗಳ ಪುತ್ರ…
ಚಿ|| ವಿಕ್ರಮರಾಜ್.
ಮಂಗಳೂರು ತಾಲೂಕು ಬೊಂದೇಲ್ ಶ್ರೀ ಅಶೋಕ ಜಿ. ಮತ್ತು ಶ್ರೀಮತಿ ಕಿರಣ್ಮಯಿ ಅಶೋಕ್ ದಂಪತಿಗಳ ಪುತ್ರಿ…
ಚಿ||ಸೌ|| ಪ್ರಿಯಾಂಕ.
ಇವರ ವಿವಾಹವು ಡಿಸೆಂಬರ್ 27,2018 ರ ಗುರುವಾರ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಬಹಳ ವಿಜೃಂಭಣೆಯಿಂದ ಬಂಧುಮಿತ್ರರು,ಕುಟುಂಬಸ್ಥರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ,ಅವರ ಶುಭಾಶೀರ್ವಾದೊಂದಿಗೆ ನಡೆಯಿತು.
ವರ ವಿಕ್ರಮ್ ರಾಜ್ ಪ್ರಸ್ತುತ ದೂರದ ಕತಾರ್ ನಲ್ಲಿ ಇಂಜಿನಿಯರ್ ಹುದ್ದೆಯಲ್ಲಿದ್ದು, ವಧು ಪ್ರಿಯಾಂಕ ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೂತನ ವಧು ವರರಿಗೆ ಭಗವಂತನು ಆರೋಗ್ಯ ಆಯುಷ್ಯ ಸಕಲ ಐಶ್ವರ್ಯ ವನ್ನು ಕೊಟ್ಟು ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.