January 18, 2025
1

ಮಹಿಳೆಯರ ಆರೋಗ್ಯ ದೃಷ್ಟಿಯಿಂದ ವಯಸ್ಸಿಗೆ ಅನುಗುಣವಾಗಿ ಒಂದಷ್ಟು ವೈದ್ಯಕೀಯ ತಪಾಸಣೆಗಳು ಮಾಡಿಸಬೇಕು

ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಮಹಿಳೆಯರಲ್ಲಿ. ವಯಸ್ಸಾದಂತೆ ಒಂದಲ್ಲ ಒಂದು ರೀತಿಯ ಆರೋಗ್ಯ ಸಂಬಂಧೀ ತೊಡಕುಗಳು ಕಾಣಿಸಿಕೊಳ್ಳುತ್ತವೆ. ಮುಟ್ಟಿನ ದಿನಗಳು, ಗರ್ಭಾವಸ್ಥೆ, ಋತುಬಂಧ ಅಥವಾ ಮುಟ್ಟು ನಿಲ್ಲು ದಿನಗಳಲ್ಲಿ ಕಾಡುವ ಅನಾರೋಗ್ಯ. ಹೀಗೆ ಪ್ರತೀ ಹಂತದಲ್ಲಿಯೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಪ್ರತೀ ವಯೋಮಾನದಲ್ಲಿಯೂ ಒಂದಷ್ಟು ನಿರ್ದಿಷ್ಟ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಹಾಗಾದರೆ ಯಾವ ವಯಸ್ಸಿನಲ್ಲಿ ಯಾವೆಲ್ಲ ತಪಾಸಣೆಗಳನ್ನು ಹೆಣ್ಣು ಮಕ್ಕಳು ಅಗತ್ಯವಾಗಿ ಮಾಡಿಸಿಕೊಳ್ಳಬೇಕು.

​20 ರಿಂದ 30 ವರ್ಷದ ನಡುವೆ ಈ ರೀತಿಯ ತಪಾಸಣೆಗಳು ಅಗತ್ಯ

  • ಗರ್ಭಕಂಠದ ಕ್ಯಾನ್ಸರ್‌ ಮತ್ತು ಲೈಂಗಿಕ ರೋಗಗಳ ಬಗ್ಗೆ ಎಚ್ಚರಿಕೆವಹಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಸ್ತನ ಕ್ಯಾನ್ಸರ್‌ನಂತೆ ಅತಿ ಹೆಚ್ಚು ಜನರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪ್ರತಿ ಹೆಣ್ಣಿಗೆ ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್ 21 ನೇ ವಯಸ್ಸಿನಲ್ಲಿ ಪ್ರಾರಂಭವಾಗಬೇಕು.
  • ಇನ್ನು ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಗಮನ ಹರಿಸುವುದು ಕೂಡ ಮುಖ್ಯ. ಲೈಂಗಿಕವಾಗಿರ ಹರಡುವ ರೋಗಗಳು ಬಂಜೆತನ, ಹೃದ್ರೋಗ, ಮಿದುಳಿನ ಹಾನಿ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯಕ್ಕೆ ಮಹಿಳೆಯರು ಒಳಗಾಗುವ ಸಾಧ್ಯತೆಗಳಿರುತ್ತದೆ. ಹೀಗಾಗಿ ತಪಾಸಣೆ ಮಾಡಿಸಬೇಕು.
  • ಸ್ತನ ಕ್ಯಾನ್ಸರ್ ಕೂಡ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕ್ಯಾನ್ಸರ್ ಸಾವುಗಳಲ್ಲಿ ಶೇ. 7ರಷ್ಟು ಸಾವು ಕ್ಯಾನ್ಸರ್‌ನಿಂದ ಉಂಟಾಗುತ್ತಿದೆ. ಹೀಗಾಗಿ 25 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆ ನಿಯಮಿತವಾಗಿ ತಪಾಸಣೆ ಅಥವಾ ಮ್ಯಾಮೋಗ್ರಾಮ್‌ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.
  • ಹೃದಯರಕ್ತನಾಳದ ಅಪಾಯದ ಬಗ್ಗೆ ಮುಂಜಾಗೃತೆವಹಿಸುವುದು ಮುಖ್ಯವಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಗರ್ಭನಿರೋಧಕ ಮಾತ್ರೆಗಳ ಸೇವನೆ ಮಾಡಿದ್ದರ ಕುರಿತಾದ ಅಪಾಯಗಳ ಬಗ್ಗೆ ಎಚ್ಚರಿಕೆ ಅಗತ್ಯವಾಗಿರುತ್ತದೆ.
  • ರೋಗ ನಿರೋಧಕ ಶಕ್ತಿಯ ಬಗ್ಗೆ ಕಾಳಜಿವಹಿಸುವುದು ಕೂಡ ಮುಖ್ಯವಾಗಿರುತ್ತದೆ. ನೀವು ಪ್ರತಿ 10 ವರ್ಷಗಳಿಗೊಮ್ಮೆ ಒಂದು ಟೆಟನಸ್-ಡಿಫ್ತಿರಿಯಾ ಬೂಸ್ಟರ್ ಅನ್ನು ಪಡೆಯಬೇಕು, ಇದು 19 ನೇ ವಯಸ್ಸಿನ ನಂತರ ಪ್ರಾರಂಭವಾಗುತ್ತದೆ. ನೀವು 26 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು HPV ಲಸಿಕೆಯನ್ನು ಪಡೆದುಕೊಳ್ಳಬೇಕು.. ಚಿಕನ್ಪಾಕ್ಸ್ ಅಪಾಯ ತಡೆಯಲು ವರಿಸೆಲ್ಲಾ ಲಸಿಕೆಯನ್ನು ಪಡೆಯಬೇಕು.

​40 ರಿಂದ 50 ವರ್ಷದ ನಡುವೆ ಈ ತಪಾಸಣೆ ಮಾಡಿಸಿಕೊಳ್ಳಿ

  • ಸ್ತನ ಕ್ಯಾನ್ಸರ್‌ನ್ನು ಪತ್ತೆ ಮಾಡಲು ಬಳಸುವ ಮ್ಯಾಮೊಗ್ರಫಿಗೆ ಒಳಪಡಬೇಕು. 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಎಷ್ಟು ಬಾರಿ ಮ್ಯಾಮೊಗ್ರಫಿ ಮಾಡಬೇಕೆಂದು ವೈದ್ಯರ ಬಳಿ ಸಲಹೆ ಪಡೆಯುವುದು ಒಳ್ಳೆಯದು.
  • ಇನ್ನು ಕರುಳಿನ ಕ್ಯಾನ್ಸರ್‌, ಅಂಡಾಶಯದ ಕ್ಯಾನ್ಸರ್‌ ಬಗ್ಗೆ ವೈದ್ಯರ ಸಲಹೆ ಮೇರೆಗೆ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
  • ಇದರ ಜೊತೆಗೆ ಅನೇಕ ಜನರಲ್ಲಿ ಕಾಡುತ್ತಿರುವ ಬೊಜ್ಜು, ಮಧುಮೇಹದಂತಹ ಕಾಯಿಲೆಗಳು ಆರಂಭವಾಗುವ ಮೊದಲೇ ಎಚ್ಚರಿಕೆವಹಿಸಿಕೊಂಡು ವೈದ್ಯರ ಸಲಹೆ ಪಡೆಯುವುದು ಉತ್ತಮ.

​ಮುಟ್ಟು ನಿಲ್ಲುವ ದಿನಗಳು

ನೀವು 40 ವರ್ಷದವರಾಗಿದ್ದಾಗ ಒಂದೆರಡು ತಪ್ಪಿದ ಅವಧಿಗಳು ನೀವು ಗರ್ಭಿಣಿ ಎಂದು ಭಾವಿಸಲು ಕಾರಣವಾಗಬಹುದು, ಆದರೆ ಈ ವಯಸ್ಸು ಮುಟ್ಟು ನಿಲ್ಲುವ ದಿನಗಳು ಆಗಿರಬಹುದು. ಸಾಮಾನ್ಯವಾಗಿ ಶೇ. 5ರಷ್ಟು ಮಹಿಳೆಯರು , 40 ಮತ್ತು 45 ರ ವಯಸ್ಸಿನ ನಡುವೆ ಋತುಬಂಧಕ್ಕೆ ಒಳಗಾಗುತ್ತಾರೆ. ಹೀಗಾಗಿ ಆ ದಿನಗಳ ಬಗ್ಗೆ ಜಾಗೃತರಾಗಿರಬೇಕು.

ಋತುಬಂಧದ ಲಕ್ಷಣಗಳು

  • ಮೂರು ತಿಂಗಳು ಅಥವಾ ಹೆಚ್ಚು ದಿನಗಳು ಕಳೆದರೂ ಮುಟ್ಟಾಗದಿರುವುದು
  • ಸಾಮಾನ್ಯ ಅವಧಿಗಳಿಗಿಂತ ಹೆಚ್ಚು ರಕ್ತಸ್ರಾವ ಅಥವಾ ರಕ್ತಸ್ರಾವ ಇಲ್ಲದೆ ಇರುವುದು
  • ನಿದ್ದೆ ಬರದೇ ಇರುವುದು
  • ದೇಹದಲ್ಲಿನ ತೂಕ ಏರಿಕೆ
  • ದೇಹ ಬಿಸಿಯಾಗುವುದು
  • ಯೋನಿಯ ಭಾಗದಲ್ಲಿ ಶುಷ್ಕತೆ ಉಂಟಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

ವೈದ್ಯರ ಸಲಹೆ

ಋತುಬಂಧ ಕುಟುಂಬದ ಇತಿಹಾಸ, ಜೀವನಶೈಲಿ, ಆಹಾರಾಭ್ಯಾಸ ಇವೆಲ್ಲವುಗಳ ಅನುಗುಣವಾಗಿ ಉಂಟಾಗುತ್ತದೆ. ಆರಂಭದಲ್ಲಿನ ಲಕ್ಣಗಳನ್ನು ನೋಡಿಕೊಂಡು ವೈದ್ಯರನ್ನು ಸಂಪರ್ಕಿಸಿ ಸರಿಯಾದ ಕಾರಣ ತಿಳಿದುಕೊಳ್ಳುವುದು ಮುಖ್ಯ.

ಋತುಬಂಧದ ಹಂತದಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಉತ್ಪಾದನೆಯು ನಿಧಾನಗೊಳ್ಳುತ್ತದೆ. ಋತುಬಂಧ 8 ರಿಂದ 10 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ನೀವು ಇನ್ನೂ ಅವಧಿಯನ್ನು ಪಡೆಯುತ್ತೀರಿ, ಆದರೆ ನಿಮ್ಮ ಮುಟ್ಟಿನ ಚಕ್ರಗಳು ಸರಿಯಾಗಿರುವುದಿಲ್ಲ. ಆದ್ದರಿಂದ ಇಂತಹ ಸಮಯದಲ್ಲಿ ಗಾಬರಿಯಾಗದೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಸಂಗ್ರಹ : SB

ಮೂಲ: ವಿ ಕೆ

Leave a Reply

Your email address will not be published. Required fields are marked *