September 20, 2024
ನೀವು ಲಘುವಾಹನ ಹೊಂದಿದ್ದರೆ , ನಿಮಗೆ ಟೋಲ್ ರೋಡ್ ಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆಯಿದ್ದರೆ ನೀವು ಖಂಡಿತ ಕಡ್ಡಾಯವಾಗಿ FASTag ನ್ನು ಅಳವಡಿಸಿಕೊಳ್ಳಬೇಕು. 
 
 
FASTag ಎಂಬುದು ಕ್ಯಾಶ್ ಲೆಸ್ ಟೋಲ್ ಪೇಮೆಂಟ್ ಸಿಸ್ಟಮ್ ಆಗಿದ್ದು , ಇನ್ನು ಮುಂದೆ ಯಾವುದೇ ಟೋಲ್ಗಳಲ್ಲಿ ವಾಹನ ನಿಲ್ಲಿಸಿ ಕೌಂಟರ್ ನಲ್ಲಿ ಹಣ ನೀಡಬೇಕಾಗಿಲ್ಲ. FASTag ಸ್ಟಿಕರ್ ಅಳವಡಿಸಿಕೊಂಡಲ್ಲಿ ಟೋಲ್ ಗೇಟ್ ನಲ್ಲಿ ಚಲಿಸುವಾಗಲೇ ನಿಮ್ಮ  ಖಾತೆಯಿಂದ ನೇರವಾಗಿ ಹಣ ಪಾವತಿಯಾಗುತ್ತದೆ. ಬ್ಯಾಂಕ್ ಖಾತೆ ಅಥವಾ ನಿಮ್ಮ FASTag. ವಾಲೆಟ್ ಗೆ ರಿಚಾರ್ಜ್ ಮಾಡುವುದು ಅನಿವಾರ್ಯವಾಗಿರುತ್ತದೆ‌‌. 
 
 
FASTag ಖಾತೆ ಅಳವಡಿಸಿಕೊಳ್ಳುವುದು ಹೇಗೆ? 
 
ನೀವು ಈ ಕೆಳಗಿನ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಬ್ಯಾಂಕ್ ಗೆ ತೆರಳಿ ಅಥವಾ ONLINE (www.fastag.org) ನಲ್ಲಿ ಅರ್ಜಿ ಸಲ್ಲಿಸಿ  FASTag ಖಾತೆ ಮತ್ತು  Sticker ಪಡೆಯಬಹುದು.
 
1) ICICI Bank
2) Axis Bank
3) IDFC Bank
4) SBI 
5) Equitas
6) HDFC Bank 
7) Syndicate Bank
8) Paytm payments Bank
9) KVB Bank
10) PNB Bank
11) Federal Bank
12) Saraswat Co-op Bank
13) South Indian Bank
 
 
ಈ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರು ನಿಮ್ಮ ವಾಹನದ ದಾಖಲಾತಿ , ಐಡಿ ಪ್ರೂಪ್, ಬ್ಯಾಂಕ್ ಖಾತೆ ವಿವರಗಳೊಂದಿಗೆ Online. ಅಥವಾ ಬ್ಯಾಂಕುಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು.
 
ಭಂಡಾರಿ ವಾರ್ತೆ

Leave a Reply

Your email address will not be published. Required fields are marked *