ನಾವೀಗ ಆಧುನಿಕ ಕಾಲದಲ್ಲಿ ಇದ್ದೇವೆ. ಹೌದು ಈಗ ಎಲ್ಲವೂ ತಂತ್ರಜ್ಞಾನವನ್ನು ಅವಲಂಬಿಸಿದೆ. ಸಂಪ್ರದಾಯಗಳು ˌಆಚರಣೆ
ಈ ಆಟಿ ತಿಂಗಳನ್ನು ಪ್ರಕೃತಿಯ ಆರಾಧನೆಯ ತಿಂಗಳು ಎಂದರೂ ಸಹ ತಪ್ಪಲಾಗರದು . ತುಳುನಾಡಿನಲ್ಲಿ ಅತಿವೃಷ್ಟಿಯ ಕಾರಣ ಈ ಮಾಸದಲ್ಲಿ ಎಲ್ಲೆಲ್ಲೊ ಬಡತನ ಇರುತ್ತದೆ. ಹೊಟ್ಟೆಯ ಹಸಿವನ್ನು ನೀಗಿಸಲು ಪರಿಸರ ಮಾತೆಯನ್ನು ಪೂಜಿಸಲಾಗುತ್ತದೆ. ಹಸಿವಿನಿಂದಿರುವ ಮಕ್ಕಳಿಗೆ ತನ್ನೂಡಲ ಹಸಿರನ್ನು ನೀಡುವ ಭೂಮಿತಾಯಿ ಕರುಣಾಮಯಿ.ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುವ ಮನುಷ್ಯನಿಗೆ ನಿಸರ್ಗ ದೇವತೆಯ ಮಹತ್ವ ತಿಳಿಯುವುದಂತೂ ನಿಜ.
ಆಟಿ ತಿಂಗಳಿನಲ್ಲಿ ಆನೇಕ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ತೇಟ್ಲ,ˌ ಪತ್ರೊಡೆˌ, ತಿಮರೆ ಚಟ್ನಿˌ,ತಜಂಕ್ ಪಲ್ಯ ಅಬ್ಬಾ!ಹೇಳಿಕೊಂಡು ಹೋದಷ್ಟು ಮುಗಿಯಲಾರವು ಬಾಯಲ್ಲಿ ನೀರೂರುತ್ತದೆ. ಈ ಆಹಾರ ಕ್ರಮಗಳು ಔಷದೀಯ ಗುಣಗಳನ್ನು ಹೊಂದಿವೆ.
ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಶುಭಕಾರ್ಯಗಳು ನಡೆಯುವುದಿಲ್ಲ. ಈ ತಿಂಗಳ ಇನ್ನೊಂದು ವಿಶೇಷವೆಂದರೆ ಆಟಿ ಕಳೆಂಜೆ. ಅಡಿಕೆ ಮರದ ಹಾಳೆಯ ಟೋಪಿ,ˌ ತೆಂಗಿನ ಮರದ ಹಸಿ ಗರಿ,ˌ ಕೆಂಪು ಬಣ್ಣದ ಅಂಗಿ,ˌ ಗೆಜ್ಜೆ ಕಟ್ಟಿ, ಡೋಲು ಪಾಡ್ದನ ಹಾಡನ್ನು ಹಾಡುತ್ತಾ ಮನೆ ಮನೆಗೆ ಬರುತ್ತಿದ್ದರು ಎಂದು ಅಮ್ಮ ಹೇಳಿದ ನೆನಪು. ನಾನಂತೂ ಆ ದೃಶ್ಯವನ್ನೇ ಕಂಡಿಲ್ಲ.
ಕಾಲ ಎಷ್ಟೋ ಬದಲಾಗಿದೆ ಎಂದರೆ ಶಾಲಾ ಕಾಲೇಜಿನಲ್ಲಿ, ಸಂಘ ಸಂಸ್ಥೆಗಳಲ್ಲಿ ಆಟಿ ತಿಂಗಳ ಬಗ್ಗೆ ಒಂದು ದಿನದ ಕಾರ್ಯಕ್ರಮದ ಮೂಲಕ ತಿಳಿಸುವ ಹಾಗೆ ಆಗಿರುವುದು ಎಷ್ಟು ವಿಪರ್ಯಾಸ…! ಒಟ್ಟಿನಲ್ಲಿ ತುಳುನಾಡಿನ ಆಚರಣೆಗಳನ್ನು ಯುವಜನತೆ ತಿಳಿಯಬೇಕಾಗಿದೆ. ಇದನ್ನೆಲ್ಲಾ ಅರಿತು ಹಿರಿಯರು ಕೊಟ್ಟ ಸಂಪ್ರದಾಯವನ್ನು ಉಳಿಸಿ ಮುಂದುವರಿಸಬೇಕಾಗಿದೆ. ಆಟಿಡೊಂಜಿ ದಿನದ ಆಚರಣೆಯ ಬದಲು ಇಡೀ ತಿಂಗಳು ಹಿಂದಿನ ಸಂಪ್ರದಾಯಗಳನ್ನು ಮತ್ತೆ ಆಚರಿಸುವಂತಾಗಲಿ.
ಲೇಖನ : ಗ್ರೀಷ್ಮಾ ಭಂಡಾರಿ ಕಲ್ಲಡ್ಕ