
ದೇವಸ್ಥಾನಗಳು ಏಕೆ ನಿರ್ಮಾಣವಾದವು ಎಂಬ ಪ್ರಶ್ನೆಗೆ ಪೂಜೆಗಾಗಿ ಅಥವಾ ಪ್ರಾರ್ಥನೆಗಾಗಿ ಎಂಬ ಸರಳ ಉತ್ತರ ದೊರೆಯಬಹುದು. ಶ್ರೀ ಸದ್ಗುರು ಜಗ್ಗಿ ವಾಸುದೇವ ಹೇಳಿರುವಂತೆ ಭಾರತೀಯ ಪ್ರಾಚೀನ ದೇವಾಲಯಗಳ ಸೃಷ್ಟಿ ಈ ಉತ್ತರವನ್ನು ನಿರೀಕ್ಷಿಸುವುದಿಲ್ಲ. ದೇವಸ್ಥಾನ ಅಥವಾ ದೈವಿ ಶಕ್ತಿ ಕೇಂದ್ರಗಳು ನಮಗೆ ತರಂಗಗಳ ಇರುವಿಕೆಯನ್ನು ಸೂಚಿಸುವ ಕೇಂದ್ರಗಳು. ಪ್ರಕೃತಿಯಲ್ಲಿ ಶಕ್ತಿ ತರಂಗಗಳು ಎಲ್ಲೆಡೆಯೂ ಇರುತ್ತವೆ. ಆದರೆ ಅನುಭವಕ್ಕೆ ಸಿಗುವುದಿಲ್ಲ. ಸೆಲ್ ಪೋನುಗಳು ಶಬ್ದ ತರಂಗವನ್ನು ಸ್ವೀಕರಿಸಿ ನಮಗೆ ನೀಡುತ್ತವೆ. ಹಾಗೆಯೇ ದೇವಾಲಯಗಳು ದೊಡ್ಡ ಏಕಮುಖ ಸೆಲ್ ಪೋನುಗಳು ನಮಗೆ ಕೇವಲ ತರಂಗಗಳ ಅನುಭವವನ್ನು ನೀಡುತ್ತವೆ.
ದೇವಾಲಯ ಒಂದು ಸಾಧನ. ದೇವಾಲಯ ಎಂಬುದು ನಿರ್ದಿಷ್ಟ ಜಾತಿ, ಗುಂಪು ಮತ್ತು ಮತಧರ್ಮಕ್ಕೆ ಸೇರಿರುವ ಆಲಯವಲ್ಲ. ಈ ಪುಟ್ಟ ಸಾಧನದ ಕೀರ್ತಿಯ ಅರಿವು ಇಲ್ಲದವರಿಗೆ ಈ ವಿಶ್ಲೇಷಣೆ ಅಪಥ್ಯವೆನಿಸಬಹುದು. ಭಾವನೆಗೆ ದಕ್ಕೆಯಾಗಬಹುದು. ಇದೊಂದು ಕೇವಲ ಬೌತಿಕ ಸಾಧನವೆಂಬ ಅರ್ಥವಲ್ಲ. ಇದೊಂದು ಸ್ಥಳ ಎಂಬುದಕ್ಕೆ ಅರ್ಥವಿಲ್ಲ. ಆಧ್ಯಾತ್ಮ ಸಾಧನ ಅಥವಾ ಸಂಪರ್ಕ ಮಾಧ್ಯಮ ಎಂಬ ಅರ್ಥ ಸೂಕ್ತ. ಏಕೆಂದರೆ ದೇವಾಲಯ ಕ್ರಿಯಾಶೀಲ ಶಕ್ತಿಯ ಮೂಲವಾಗಿದೆ.
ದೇವಾಲಯ ನಿರ್ಮಿಸಲು ಬೇಕಾದ ಸಲಕರಣೆಗಳೊಂದಿಗೆ ಧ್ಯಾನಲಿಂಗವೊಂದನ್ನು ಇಡಲಾಗುತ್ತದೆ. ಇದು ಪುಟ್ಟ ಸಾಧನವಾದರೂ ಪ್ರಮುಖ ಭಾಗವೆಂದೇ ಪರಿಗಣಿಸಲ್ಪಡುತ್ತದೆ. ಬಾಗಿಲಿನ ಜೋಡನೆಗೆ ಸ್ಕ್ರೂ ಗಳು ಎಷ್ಟು ಮುಖ್ಯವೋ ಹಾಗೆ. ಇಲ್ಲಿ ಸ್ಕ್ರೂ ನ ಗಾತ್ರ ನೋಡಬೇಡಿ. ಅದರ ಸಾಮರ್ಥ್ಯದ ಬಗ್ಗೆ ಯೋಚಿಸಿ.

ದೇವಸ್ಥಾನಗಳ ಸ್ಥಳದ ಆಯ್ಕೆ ಹೇಗಿರುತ್ತದೆ?
“ಹಿಂದೆ ಒಬ್ಬ ಒಕ್ಕಲು ಕೃಷಿಕನೊಬ್ಬ ತನ್ನ ಕೊನೆ ಕಾಲದಲ್ಲಿ ತನ್ನ ಇಬ್ಬರು ಮಕ್ಕಳಿಗೆ ಕೃಷಿಯಿಂದ ಬರುವ ಆದಾಯವನ್ನು ಸಮನಾಗಿ ಹಂಚಿಕೊಳ್ಳಬೇಕು ಇದು ತನ್ನ ಕೊನೆಯ ಬಯಕೆಯೆಂದು ಕೊನೆಯುಸಿರೆಳೆದ. ತಂದೆಯ ಮಾತನ್ನು ದಿಕ್ಕರಿಸದೇ ಸಮನಾಗಿ ಬೆಳೆ ಹಂಚಿಕೊಂಡರು. ಇಬ್ಬರು ಸಹೋದರರಲ್ಲಿ ಒಬ್ಬ ಮಗ ಮದುವೆಯಾದ. ಐದು ಮಕ್ಕಳನ್ನು ಪಡೆದ. ಇನ್ನೊಬ್ಬ ಮದುವೆಯಾಗದೇ ಒಂಟಿಯಾಗಿದ್ದ. ಹಲವು ವರ್ಷ ಕಳೆದ ನಂತರ ಮದುವೆಯಾದ ಸೋದರನಿಗೆ ತನ್ನ ತಮ್ಮ ಒಂಟಿಯಾಗಿದ್ದಾನೆ. ನನಗೆ ಮಕ್ಕಳಿದ್ದಾರೆ. ಮಕ್ಕಳು ದೊಡ್ಡವರಾಗಿದ್ದಾರೆ. ಪಕ್ಕದ ಜಮೀನುಗಳನ್ನು ಗೇಣಿಗೆ ಪಡೆದು ಬೆಳೆ ಬೆಳೆಯಬಹುದು. ಆದರೆ ತನಗೆ ವಯಸ್ಸಾದಂತೆ ತಮ್ಮನಿಗೂ ವಯಸ್ಸಾಯಿತು. ಆತನಿಗೆ ತಾನು ಸಹಾಯ ಮಾಡಬೇಕು.

ದೇವಾಲಯ ನಿರ್ಮಾಣ ಭಾರತದಲ್ಲಿ ದೈವಿ ಸೂಕ್ಷ್ಮ ಸ್ಥಳಗಳಲ್ಲೇ ನಿರ್ಮಾಣವಾಗುತಿತ್ತು ಎಂಬ ವಾದವಿದೆ. ದೈವಿಕ ಶಕ್ತಿ ಮನುಷ್ಯನ ಒಳ್ಳೆಯ ಕಾರ್ಯಗಳಿಂದಲೇ ಸಿದ್ದಿಸುತ್ತದೆ. ಧರ್ಮಾತ್ಮರು ಇರುವಲ್ಲಿ ದೇವರ ಸಾನಿಧ್ಯವಿರುತ್ತದೆ ಎಂಬುದನ್ನು ಸದ್ಗುರು ಉದಾಹರಿಸಿದ ಈ ಮೇಲಿನ ಕತೆಯ ಮೂಲಕ ತಿಳಿಯಬಹುದು.
ದೇವಾಲಯಗಳು ನೀಡುವ ಆತ್ಮತೃಪ್ತಿಗಳು:
ದೇವಾಲಯಗಳಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯಲೇ ಬೇಕು. ಇಲ್ಲವಾದರೆ ಮನುಷ್ಯನಾದವನು ತೃಪ್ತನಾಗಲು ಸಾಧ್ಯವಿಲ್ಲ.
ಆತ್ಮ ತೃಪ್ತಿ ನೀಡುವುದು ದೇವಾಲಯದ ಪರಮಗುರಿ. ಇಲ್ಲಿ ಊಳಿಗ , ಪ್ರತಿಫಲ ಬಯಸದ ಶ್ರಮದಾನ ಅರ್ಥ ಕಳೆದುಕೊಳ್ಳುತ್ತದೆ. ಇದಕ್ಕಿಂತ ತನ್ನ ಶ್ರಮ ವ್ಯಯಿಸಿ ಪೂರ್ವನಿರ್ಧಾರಿತ ಪ್ರತಿಫಲ ಪಡೆಯುವವನೇ ಶ್ರೇಷ್ಠ (ಬ್ರಾಹ್ಮಣ)ನಾಗುತ್ತಾನೆ. ಮನುಷ್ಯ ದುಡಿಯುವುದರಲ್ಲಿ ಹೇಗೆ ಸಂತಸ ಕಾಣುತ್ತನೋ … ಅದರ ಫಲ ಅನುಭವಿಸಲೂ ಅಷ್ಟೇ ಹಾತೊರೆಯುತ್ತಾನೆ.

ಭಯದಿಂದ ದೇವರ ಕಂಡವರು ಪರಮ ಭಕ್ತರ ವೇಷ ತೊಡುತ್ತಾರೆ. ಭಕ್ತಿಯ ಪರಾಕಾಷ್ಠೆ ತೋರಿಸಿಕೊಳ್ಳುವಲ್ಲಿ ಆತ್ಮ ತೃಪ್ತಿ ಪಡೆಯುತ್ತಾರೆ.
ಆಧುನಿಕ ಭಾರತದ ದೇವಸ್ಥಾನಗಳು ಹೇಗಿವೆ?
ಕಾಲ ಬದಲಾದಂತೆ ಭಾರತದ ಪ್ರಾಚೀನ ವಿಜ್ಞಾನ ಮರೆಯಾಗಿ ಜಾತಿ ಮತಗಳ ವಿಜೃಂಬಣೆ ಅಧಿಕವಾಗಿ ಪೂಜೆ , ಉತ್ಸವ ಆಚರಣೆಗಳು , ಸಾಮೂಹಿಕ ಪ್ರಾರ್ಥನೆ ಮುಂತಾದುವುಗಳೇ ದೇವಸ್ಥಾನಗಳಲ್ಲಿ ಸ್ಥಾನ ಪಡೆಯಿತು. ಪಾಶ್ಚಿಮಾತ್ಯ ಮತಗಳ ಪ್ರಭಾವದಿಂದ ಘೋರಿಗಳು ದೇವಾಲಯಗಳಾದವು , ಪ್ರಾರ್ಥನಾ ಕೇಂದ್ರಗಳು , ಭಜನಾ ಕೇಂದ್ರಗಳು ದೇವಸ್ಥಾನವಾಯಿತು. ದೇವಸ್ಥಾನಗಳನ್ನು ಪ್ರಾರ್ಥನಾ ಕೇಂದ್ರಗಳಿಗೆ ಸೀಮಿತಗೊಳಿಸಲಾಗಿದೆ. ದೇವಸ್ಥಾನದ ಮಹಿಮೆಯನ್ನು ಅದರ ಸಂಪತ್ತಿನ ಆಧಾರದಲ್ಲಿ ಅಳೆಯಲಾಗುತ್ತಿದೆ. ಅತಿ ಹೆಚ್ಚು ದೇಣಿಗೆ ನೀಡಿದವರ ಹೆಸರನ್ನು ಅಲ್ಲಲ್ಲಿ ಕೆತ್ತಲಾಗುತ್ತದೆ.
ಭಕ್ತಿಯನ್ನು ದುಡ್ಡಿನಿಂದಲೇ ಅಳೆಯುವ ಕೆಟ್ಟ ಸಂಪ್ರದಾಯ ಈಗಾಗಲೇ ದೇಶದೆಲ್ಲೆಡೆ ವಿಜೃಂಬಿಸುತಿದೆ. ಪ್ರಾಚೀನ ಕಾಲದಲ್ಲಿ ದೇವಾಲಯವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ಮಿಸಲಾಗುತಿತ್ತು. ಸಮಾಜ ಸೇವೆ, ಯೋಗ, ಧ್ಯಾನ , ಆಧ್ಯಾತ್ಮ ಶಿಕ್ಷಣ, ಶೋಧನೆ ಮತ್ತು ಪ್ರಸಾರ, ಸಂಪತ್ತಿನ ರಕ್ಷಣೆ, ಪ್ರಕೃತಿ ಆರಾಧನೆ ಮುಂತಾದ ಶ್ರೇಷ್ಠ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುತಿತ್ತು. ಆಗಮ ಶಾಸ್ತ್ರಕ್ಕೆ ಚ್ಯುತಿ ಬಾರದಂತೆ ವೈಜ್ಞಾನಿಕವಾಗಿ ದೇವಾಲಯದ ನಿರ್ಮಾಣವಾಗುತಿತ್ತು. ಆದರೆ ಈಗಿನ ದೇವಾಲಯಗಳು ಶಾಪಿಂಗ್ ಕಾಂಪ್ಲೆಕ್ಸ್ ಗಳಾಗಿ, ಚರ್ಚ್, ಮಸೀದಿಗಳಂತೆ ಪ್ರಾರ್ಥನಾ ಮಂದಿರಗಳಾಗಿ, ತಮ್ಮ ತಮ್ಮ ಜಾತಿ – ಪಂಗಡಗಳ ಕ್ಲಬ್ ಗಳಾಗಿ ಬದಲಾಗಿದೆ. ಬಣ್ಣ ಬಣ್ಣದ ಬೆಳಕಿನ ಅಲಂಕಾರ , ವಿಪರೀತ ಶಬ್ದ ಮಾಲಿನ್ಯ ಮಾಡುವ ಸಾಧನಗಳು ಕಂಡುಬರುತ್ತವೆ. ದಕ್ಷಿಣ ಭಾರತದ ಜನ ಈಗಲೂ ದೇವಸ್ಥಾನದಲ್ಲಿ ಸ್ವಲ್ಪಹೊತ್ತು ಕುಳಿತುಕೊಳ್ಳುವ ಕಟ್ಟುಪಾಡು ಹೊಂದಿದ್ದಾರೆ. ಇದು ದೇವಾಲಯಗಳಲ್ಲಿ ಮಾಡಲೇಬೇಕಾದ ನಿಜವಾದ ಕ್ರಮ.



ಆತ್ಮ ತೃಪ್ತಿಯಿಂದ ದೇವರ ಕಾಣಲು ಸಾಧ್ಯವಾದರೆ ಆತ ನಿಮ್ಮೊಡನೆ ಸದಾ ಸಂಹವನದಲ್ಲಿದ್ದು ಕಾಪಾಡುತ್ತಾನೆ.
ಸರ್ವೇಃ ಭವಂತುಃ ಸುಖಿನಃ