January 18, 2025
bv 4

World Milk Day 2022: ವಿಶ್ವ ಹಾಲಿನ ದಿನ 2022: ಹಾಲು ಕುಡಿದರೆ ಮೈಬೊಜ್ಜು ತಡೆಗಟ್ಟಬಹುದು ಗೊತ್ತಾ?

ಜೂನ್‌ 1ನ್ನು ವಿಶ್ವ ಹಾಲಿನ ದಿನವನ್ನಾಗಿ ಆಚರಿಸಲಾಗುವುದು. ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆ 2001ರಿಂದ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಪ್ರಯೋಜನಗಳ ಕುರಿತು ಜನರಿಗೆ ತಿಳಿಸಿ , ಡೈರಿ ಕೈಗಾರಿಕೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುವುದು.

2022ರ ಥೀಮ್ ಈ ವರ್ಷದ ಥೀಮ್‌ ‘ಡೈರಿ ನೆಟ್‌ ಜೀರೋ’ ಎಂಬುವುದಾಗಿದೆ. ಮುಂದಿನ 30 ವರ್ಷದಲ್ಲಿ ಹಸಿರು ಮನೆ ಅನಿಲ ಬಿಡುಗಡೆ ಸಂಪೂರ್ಣ ತಡೆಗಟ್ಟಿ ಈ ಮೂಲಕ ಪರಿಸರಕ್ಕೆ ಒಂದಿಷ್ಟೂ ಹಾನಿಯಾಗದಂತೆ ಮಾಡುವುದೇ ಈ ವರ್ಷದ ಥೀಮ್‌ ಆಗಿದೆ.

ಹಾಲನ್ನು ನಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಸೇರಿಸುವುದು ತುಂಬಾನೇ ಅವಶ್ಯಕ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಮಕ್ಕಳ ಬೆಳವಣಿಗೆಗೆ ಅವಶ್ಯಕವಾಗಿದೆ, ದೊಡ್ಡವರಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸಲು ಅವಶ್ಯಕವಾಗಿದೆ. ಹಸು, ಕುರಿ, ಎಮ್ಮೆ, ಆಡು, ಕತ್ತೆ ಹಾಲು ಈ ಎಲ್ಲಾ ಹಾಲುಗಳಲ್ಲಿ ತುಂಬಾನೇ ಪೋಷಕಾಂಶವಿದೆ. ಜನರು ಹೆಚ್ಚಾಗಿ ಹಸುವಿನ ಹಾಲು ಸೇವಿಸುತ್ತಾರೆ. ಇನ್ನು ಕತ್ತೆ ಹಾಲು ತಾಯಿಯ ಎದೆ ಹಾಲಿಗೆ ಪರ್ಯಾಯವಾಗಿದೆ ಅಂದರೆ ಅಷ್ಟೊಂದು ಪೋಷಕಾಂಶ ಅದರಲ್ಲಿದೆ.

ಹಾಲು ಕುಡಿದರೆ ದಪ್ಪಗಾಗುತ್ತೇವೆ ಎಂದು ತುಂಬಾ ಜನ ಹೇಳುತ್ತಾರೆ ಆದರೆ ವೈಜ್ಞಾನಿಕವಾಗಿ ನೋಡಿದಾಗ ಅದು, ಹಾಲು ನಿಮ್ಮ ದೇಹದ ಫಿಟ್ನೆಸ್ ಕಾಪಾಡಲು ಸಹಕಾರಿಯಾಗಿದೆ. ಹಾಲು ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ, ಇದನ್ನು ಸೇವಿಸಿದರೆ ಮೈ ತೂಕ ಹೆಚ್ಚಲು ಏಕೆ ಎಂಬುವುದನ್ನು ವೈಜ್ಞಾನಿಕ ಆಧಾರದ ಮೇಲೆ ವಿವರಿಸಲಾಗಿದೆ ನೋಡಿ:

ಹಾಲಿನಲ್ಲಿ ಪೋಷಕಾಂಶಗಳು ಅಧಿಕವಿದೆ ಮಕ್ಕಳ ಬೆಳವಣಿಗೆಯಲ್ಲಿ

ಹಾಲು ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ

: 244 ಗ್ರಾಂ ಹಾಲಿನಲ್ಲಿ ಇಷ್ಟೆಲ್ಲಾ ಪೋಷಕಾಂಶಗಳಿವೆ ಕ್ಯಾಲೋರಿ

: 146 ಪ್ರೊಟೀನ್

:8 ಗ್ರಾಂ ಕೊಬ್ಬಿನಂಶ

: 8 ಗ್ರಾಂ ಕ್ಯಾಲ್ಸಿಯಂ

: RDAಯದ ಶೇ. 28ರಷ್ಟು

: ರಿಬೋಫ್ಲೇವಿನ್‌ (B2):RDAಯದ ಶೇ. 26ರಷ್ಟು

: ವಿಟಮಿನ್‌ ಬಿ 12:RDAಯದ ಶೇ. 18ರಷ್ಟು

: ಪೊಟಾಷ್ಯಿಯಂ: RDAಯದ ಶೇ. 10ರಷ್ಟು

: ರಂಜಕ:RDAಯದ ಶೇ. 22ರಷ್ಟು

: ಸೆಲೆನಿಯಮ್‌: RDAಯದ ಶೇ. 13ರಷ್ಟು

2. ಅತ್ಯುತ್ತಮ ಪ್ರೊಟೀನ್‌ಯುಕ್ತ ಆಹಾರ:

ಹಾಲು ಅತ್ಯುತ್ತಮವಾದ ಪ್ರೊಟೀನ್‌ಯುಕ್ತ ಆಹಾರವಾಗಿದೆ. ಒಂದು ಕಪ್‌ ಹಾಲು ಕುಡಿದರೆ 8ಗ್ರಾಂ ಪ್ರೊಟೀನ್ ದೊರೆಯುತ್ತದೆ. ಪ್ರೊಟೀನ್‌ ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕ. ದೇಹದ ಸ್ನಾಯುಗಳು ಹಾನಿಯೊಳಗಾಗಿದ್ದರೆ ಅದನ್ನು ಸರಿಪಡಿಸಲು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಲ್ಲದಕ್ಕೂ ಪ್ರೊಟೀನ್‌ ಅವಶ್ಯಕವಾಗಿದೆ. ಯಾರು ಹಾಲನ್ನು ಕುಡಿಯುತ್ತಾರೋ ಅವರಿಗೆ ಸ್ನಾಯುಗಳ ಸಮಸ್ಯೆ ಕಡಿಮೆ ಇರುತ್ತದೆ.

3. ಮೂಳೆಯ ಆರೋಗ್ಯ ಪ್ರಯೋಜನಕಾರಿ ವಯಸ್ಸಾಗುತ್ತಿದ್ದಂತೆ

ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಪ್ರಾರಂಭವಾಗುವುದು. ಅದನ್ನು ತಡೆಗಟ್ಟುವಲ್ಲಿ ಹಾಲು ಸಹಕಾರಿಯಾಗಿದೆ. ಶೇ. 99ರಷ್ಟು ಕ್ಯಾಲ್ಸಿಯಂ ಹಲ್ಲುಗಳು ಹಾಗೂ ಮೂಳೆಗಳಲ್ಲಿ ಸಂಗ್ರಹವಾಗಿರುತ್ತದೆ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಮೂಳೆಗಳಲ್ಲಿ ಸಮಸ್ಯೆ ಅಂದರೆ ಸಂಧಿವಾತದಂಥ ಸಮಸ್ಯೆ ಪ್ರಾರಂಭವಾಗುವುದು.

4. ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟುತ್ತೆ

ಹಾಲು ಒಬೆಸಿಟಿ ತಡೆಗಟ್ಟುತ್ತೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಒಂದು ಅಧ್ಯಯನದಲ್ಲಿ 18,000 ಜನರು ಭಾಗವಹಿಸಿದ್ದರು, ಇವರಲ್ಲಿ ಮಧ್ಯ ವಯಸ್ಸಿನ ಹೆಂಗಸರು ಹಾಗೂ ವಯಸ್ಸಾದವರು ಇದ್ದರು. ಯಾರು ಅಧಿಕ ಡೈರಿ ಉತ್ಪನ್ನಗಳನ್ನು ಬಳಸುತ್ತಿದ್ದರೋ ಅವರಲ್ಲಿ ಒಬೆಸಿಟಿ ಸಮಸ್ಯೆ ಇಲ್ಲದಿರುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಹಾಲು ಕುಡಿದಾಗ ಹೊಟ್ಟೆ ತುಂಬಿರುವುದರಿಂದ ಅಧಿಕ ತಿನ್ನುವುದು ಕಡಿಮೆಯಾಗುವುದು, ಹೀಗಾಗಿ ಮೈ ತೂಕ ನಿಯಂತ್ರಿಸಲು ಸಹಕಾರಿಯಾಗಿದೆ.

ಯಾರಿಗೆ ಹಾಲು ಅಲರ್ಜಿ ಇದೆಯೋ ಅವರು ಇವುಗಳನ್ನು ಬಳಸಬಹುದು * ಬಾದಾಮಿ ಹಾಲು * ತೆಂಗಿನಕಾಯಿ ಹಾಲು * ಗೋಡಂಬಿ ಹಾಲು * ಸೋಯಾ ಹಾಲು * ಓಟ್‌ ಮಿಲ್ಕ್‌ * ರೈಸ್‌ ಮಿಲ್ಕ್

ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ

ಮೂಲ: HBK

Leave a Reply

Your email address will not be published. Required fields are marked *