November 22, 2024

ಯಾರನ್ನು ನನ್ನವರೆಂದು
ನಂಬಲಿ ಇಂತಹ
ಕ್ರೂರ ಜಗತ್ತಿನಲ್ಲಿ…
ದಿನದಿನವೂ ವಂಚನೆ
ಮೋಸ ಅಟ್ಟಹಾಸ
ಪ್ರತಿಕಾರ ತುಂಬಿರುವ ಜಾಗದಲ್ಲಿ….
ಪ್ರೀತಿ ಎಂಬ ಮುಖವಾಡ
ಧರಿಸಿ ಬಣ್ಣದ ಮಾತುಗಳನ್ನಾಡಿ
ಮರುಳು ಮಾಡುವವರ ನಂಬಲೇ….
ಇಲ್ಲ, ನಾನೆಂದಿಗೂ ನಿನ್ನ
ಜೊತೆ ಇರುವೆ ಎಂದು ಹೇಳಿ
ಅರ್ಧ ದಾರಿ ಕ್ರಮಿಸುವ ಮೊದಲೇ ದೂರವಾದ
ಇನಿಯನ ನೆನೆಯಲೇ…
ಸಾಕಾಯಿತು ಈ ಜಂಜಾಟದ
ಬದುಕು….
ಜೀವನವೇ ಬೇಡವೆಂದು
ನಿರ್ಧರಿಸಿದವಳಿಗೆ
ಸಿಕ್ಕಿತೊಂದು ಭರವಸೆಯ
ಬೆಳಕು….
ನನ್ನೆಲ್ಲಾ ನೋವುಗಳಿಗೆ
ಮರುಗಿ ಸ್ವಾಂತನ ತುಂಬಲು ಮುಂದಾದ ಅನಾಮಿಕ
ಭಗವಂತನ ಇಚ್ಛೆ ಹೀಗಿತ್ತೆಂದು
ಬಾಳುತ್ತಿರುವೆ ಅನಾಮಿಕ
ನ ಜೊತೆ ಅನಾಮಿಕಳಾಗಿ
ಅಲ್ಲ ಆತನ ಧರ್ಮಪತ್ನಿಯಾಗಿ.

✍: ಸುಪ್ರೀತ ಭಂಡಾರಿ, ಸೂರಿಂಜೆ

 

Leave a Reply

Your email address will not be published. Required fields are marked *