January 18, 2025
Untitled-1

      ಅಕ್ಟೋಬರ್ 7 : ಮೂಡಬಿದಿರೆಯ ಪದ್ಮಾವತಿ ಕಲಾಮಂಟಪದಲ್ಲಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ, ಇದರ ವತಿಯಿಂದ ನಡೆದ 21ನೇ ವರ್ಷದ “ಯಕ್ಷೋಚ್ಛಯ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು ತುಳುಭಾಷಾ ಖ್ಯಾತ ಪ್ರಸಂಗಕರ್ತ, ಸಾಹಿತಿ, ಜ್ಯೋತಿಷಿ ಕೆ. ಆನಂತರಾಮ ಬಂಗಾಡಿಯವರಿಗೆ “ಯಕ್ಷದೇವ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

       ಈ ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಅಭಯ ಚಂದ್ರಜೈನ್, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರೈ, ಗಣೇಶ್ ಅಮೀನ್ ಸಂಕಮಾರ್, ಇನ್ನೊಬ್ಬ ಪ್ರಶಸ್ತಿಗೆ ಪಾತ್ರರಾದ ಅರುವ ಕೊರಗಪ್ಪ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

      ನೂರೈವತ್ತಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದಲ್ಲೂ ಸಾಧನೆಗೈದು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ  ಶ್ರೀಯುತ ಬಂಗಾಡಿಯವರಿಗೆ ಆ ಭಗವಂತನು ಆಯುರಾರೋಗ್ಯ ಕೊಟ್ಟು ಇನ್ನಷ್ಟು ಸಾಧನೆಗೈದು ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತಾದ ಭಂಡಾರಿ ವಾರ್ತೆ ಆಶಿಸುತ್ತದೆ.

  • ಭಂಡಾರಿ ವಾರ್ತೆ

Leave a Reply

Your email address will not be published. Required fields are marked *