
ಪಡುಬಿದ್ರಿ ಮನ್ಸ ಭಂಡಾರಿ ಮತ್ತು ಎಕ್ಕಾರು ನಡುಮನೆ ನರ್ಸಿ ಭಂಡಾರಿ ಇವರ ದ್ವಿತೀಯ ಮಗಳಾದ ಅಂಬಾ ಭಂಡಾರಿ(ದಿವಂಗತ ವಿಠಲ ಭಂಡಾರಿ ತೀರ್ಥಹಳ್ಳಿ ಇವರ ಧರ್ಮಪತ್ನಿ.) ಇವರು ಅಲ್ಪಕಾಲದ ಅಸೌಖ್ಯದಿಂದ ಡಿಸೆಂಬರ್ 21 ರ ಗುರುವಾರ ನಿಧನರಾಗಿದ್ದಾರೆ. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.ಇವರ ಅಂತ್ಯಕ್ರಿಯೆ ಡಿಸೆಂಬರ್ 22 ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಅವರ ಸ್ವಗ್ರಾಮ ಎಕ್ಕಾರಿನಲ್ಲಿ ನಡೆಯಲಿದೆ. ಮೃತರು ಮಗ, ಸೊಸೆ, ಮತ್ತು ಮೊಮ್ಮಗಳು ಹಾಗೂ ಮೂರು ಜನ ಸಹೋದರರೊಂದಿಗೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
—ಭಂಡಾರಿವಾರ್ತೆ.