January 18, 2025
WhatsApp Image 2021-12-19 at 09.40.04

ಮಂಗಳೂರು ತಾಲ್ಲೂಕು ಕಟೀಲು ಎಕ್ಕಾರು ನಡುಮನೆ ಭಂಡಾರಿ ಕುಟುಂಬದ ಯಜಮಾನ ಹಾಗೂ ಕುಟುಂಬದ ದೈವಗಳ ಪೂಜ ಕೈಂಕರ್ಯಗಳ ಗಡಿಕಾರರಾಗಿದ್ದ ಶ್ರೀ ರಮಾನಂದ ಭಂಡಾರಿಯವರು 19.12.2021 ನೇ ಆದಿತ್ಯವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು . ಮೃತರ ಪತ್ನಿ ಕೆಲ ಸಮಯದ ಹಿಂದಷ್ಟೆ ದೈವಾಧೀನರಾಗಿರುತ್ತಾರೆ.

ಪ್ರಸ್ತುತ ರಮಾನಂದ ಭಂಡಾರಿಯವರ ನಿಧನ ಎಕ್ಕಾರು ನಡುಮನೆ ಕುಟುಂಬಸ್ಥರಿಗೆ ತುಂಬಲಾರದ ನಷ್ಟವಾಗಿದೆ.

ಮೃತರು ಮಗನಾದ ಗೌತಮ್ ಭಂಡಾರಿ ಹಾಗೂ ಮಗಳು ಅಂಜಲಿ ಮತ್ತು ಅಳಿಯ , ಮೊಮ್ಮಗಳು , ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರ ಚಿರಶಾಂಶಾಂತಿಯನ್ನು ಕರುಣಿಸಿ ಕುಟುಂಬ ವರ್ಗಕ್ಕೆ ಅಗಲುವಿಕೆಯ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *