January 18, 2025
anu 2

ಬಾಳ ಬಯಲಲಿ
ಒಂಟಿ ಪಯಣ…
ಕಾಡ ಕತ್ತಲಲಿ
ನೀರವ ಮೌನ…
ಎತ್ತ ಸಾಗಿದೆ ಜೀವನ
ಗುರಿಯಿರದೆ ಬಿಟ್ಟಂತೆ ಬಾಣ….

ಮಾತು ಹೆಣೆದವರು
ಮನ ತಿಳಿಯಲಿಲ್ಲ
ಎದುರು ಸಿಕ್ಕವರು
ಜತೆ ನಿಲ್ಲಲಿಲ್ಲ
ಒಲವ ಹಂಚಿದವರು
ಬಾಳ ಸೇರಲಿಲ್ಲ
ಕರಗಿ ಹೋಗಿದೆ
ಕನಸುಗಳ ಹವನ
ಭ್ರೂಣ ಮಗುವಾಗುವ ಮೊದಲೇ ಬಿಟ್ಟಂತೆ ಪ್ರಾಣ
ಏನು ಎತ್ತ ತಿಳಿಯದಾಗಿದೆ ಈ ಮನ….

✍ ಎ ಆರ್ ಭಂಡಾರಿ ವಿಟ್ಲ

Leave a Reply

Your email address will not be published. Required fields are marked *