January 18, 2025
vijay2

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಉದಯ ಭಂಡಾರಿ ಮತ್ತು ಗುಲಾಬಿ ಭಂಡಾರಿ ದಂಪತಿಯ ಪುತ್ರ ವಿಜಯ ಭಂಡಾರಿ ನಿಟ್ಟೂರು ಇವರಿಗೆ ನವೆಂಬರ್ 14, 2018 ರ ಬುಧವಾರ ಹುಟ್ಟು ಹಬ್ಬದ ಸಂಭ್ರಮ.

 
ವಿಜಯ್ ನಿಟ್ಟೂರು ಪದವೀಧರರಾಗಿದ್ದು ಪ್ರಸ್ತುತ ತಮ್ಮ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ನಿಟ್ಟೂರಿನಲ್ಲಿ ನೆಲೆಸಿದ್ದಾರೆ. ಇವರು ಒಬ್ಬ ಹವ್ಯಾಸಿ ಬರಹಗಾರರು.ಇವರು ಈವರೆಗೆ ಬರೆದ ಹಲವಾರು ಕತೆ ,ಕವನ,ಲೇಖನಗಳು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನಾಟಕ ರಚನೆ, ಓದು ಮತ್ತು ಕ್ರೀಡೆ ಇವರ ಇನ್ನಿತರ ಹವ್ಯಾಸಗಳು.


ವಿಜಯ ಭಂಡಾರಿ ನಿಟ್ಟೂರು ಅವರು ಈಗಾಗಲೇ ಭಂಡಾರಿ ವಾರ್ತೆಯ ಓದುಗರಿಗೆ ಚಿರಪರಿಚಿತರಾಗಿದ್ದಾರೆ.ಇವರು ಭಂಡಾರಿ ವಾರ್ತೆಗಾಗಿ ಬರೆದ “ಬದಲಾವಣೆಯ ಪರ್ವ, ಮೊದಲು ಮಾನವನಾಗು, ಕತ್ರಿ ಕೋಪೇಶ್ವರ ಮಹಿಮೆ, ಬೆಳೆಯಬೇಕಾಗಿದೆ ಬೆಳೆದವರು ತಲೆಯೆತ್ತಿ ನೋಡುವಂತೆ, ಮತ್ತೆ ಮತ್ತೆ ಕಾಡುವ ಪಾಪ,ಮೂರು ಮತ್ತೊಬ್ಬರ ಕಥೆ,ಪತ್ರ ಪಾರಿತೋಷಕ ಮತ್ತು ನಾಗರಪಂಚಮಿಯಂದು ಬರೆದ ಪಡೆಯಬೇಡಿ ಪಾಪದ ಫಲ” ಲೇಖನಗಳು ಓದುಗರನ್ನು ಮುದಗೊಳಿಸುವ ಜೊತೆಗೆ ಚಿಂತನೆಗೆ ಪ್ರೇರೇಪಿಸಿರುವುದು ಸುಳ್ಳಲ್ಲ. ಸಾಮಾಜಿಕ ಚಿಂತನೆಯ ಮತ್ತು ಸಮಾಜದೆಡೆಗೆ ಅವರಿಗಿರುವ ಕಾಳಜಿಯನ್ನು ಅವರ ಲೇಖನಗಳಲ್ಲಿ ಮತ್ತು ಕವನಗಳಲ್ಲಿ ಕಾಣಬಹುದು. ಭವಿಷ್ಯದಲ್ಲಿ ಉತ್ತಮ ಬರಹಗಾರರಾಗುವ ಎಲ್ಲಾ ಲಕ್ಷಣಗಳು ಅವರಲ್ಲಿವೆ.

ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಸೃಜನಾತ್ಮಕವಾಗಿ ಏನನ್ನು ಬೇಕಾದರೂ ಮಾಡಬಹುದು ಎಂಬುದನ್ನು ನಿರೂಪಿಸಿರುವ ಯುವ ಬರಹಗಾರ, ಲೇಖಕ ವಿಜಯ್ ಭಂಡಾರಿ ನಿಟ್ಟೂರು ಅವರಿಗೆ ಭಗವಂತನು ಆಯುರಾರೋಗ್ಯವನ್ನು ದಯಪಾಲಿಸಿ, ಉಜ್ವಲ ಭವಿಷ್ಯವನ್ನು ಪ್ರಸಾದಿಸಲಿ ಎಂದು ಹಾರೈಸುತ್ತಾ “ಭಂಡಾರಿವಾರ್ತೆ” ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *