January 19, 2025
Shanmukananda Mudigere3

ಮೂಡಿಗರೆ  ನಗರದ ಶ್ರೀ  ಕೊರಗಪ್ಪ ಭಂಡಾರಿ  ಮತ್ತು ಶ್ರೀಮತಿ ಜಾನಕಿ ಭಂಡಾರಿ  ದಂಪತಿಯ ಪುತ್ರ ಹಾಗೂ  ಮೂಡಿಗೆರೆ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಮತ್ತು  ಮೂಡಿಗೆರೆ ಭಂಡಾರಿ ಸಮಾಜ  ಸಂಘದ  ಅಧ್ಯಕ್ಷ ಹಾಗೂ ಮೂಡಿಗೆರೆ ಷಣ್ಮುಖಾನಂದ ಟೈಲರ್ಸ್ ಮಾಲಿಕ

ಶ್ರೀ  ಷಣ್ಮುಖಾನಂದ ಭಂಡಾರಿ 

ಮಂಜೇಶ್ವರ ಶ್ರೀ  ತನಿಯಪ್ಪ ಭಂಡಾರಿ ಮತ್ತು ಶ್ರೀಮತಿ  ಭವಾನಿ   ಭಂಡಾರಿ ದಂಪತಿಯ ಪುತ್ರಿ

ಶ್ರೀಮತಿ ವನಿತಾ

ಇವರ ದಾಂಪತ್ಯ ಜೀವನದ ಮೂವತ್ತಾಮೂರನೇ ವಾರ್ಷಿಕೋತ್ಸವದ  ಸಂಭ್ರಮಾಚರಣೆಯನ್ನು ಜೂನ್  2 ನೇ ಮಂಗಳವಾರದಂದು   ಬಹಳ ಸರಳವಾಗಿ ಮೂಡಿಗೆರೆ  ನಗರದ ತಮ್ಮ  ಮನೆಯಲ್ಲಿ ಆಚರಿಸಿದರು.

ಶುಭ ಸಂದರ್ಭದಲ್ಲಿ  ಗುಜರಾತ್ ನಲ್ಲಿ  ರಿಲಯನ್ಸ್  ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ  ಕರ್ತವ್ಯ ನಿರ್ವಹಿಸುತ್ತಿರುವ  ಪುತ್ರ  ಭರತ್  ಮತ್ತು ಅಮೇರಿಕದಲ್ಲಿ ನರ ಸಂಶೋಧನೆಯ ಸಂಶೋಧಕಿಯಾಗಿ  ವೃತ್ತಿ ಹಾಗೂ  ಸಂಸಾರಿಕ ಜೀವನ ನಡೆಸುತ್ತಿರುವ   ಪುತ್ರಿ  ಡಾ॥ ಶ್ರುತಿ ಸುಭಾಷ್ ಚಂದ್ರ  ಮತ್ತು   ಅಳಿಯ ಸುಭಾಷ್ ಚಂದ್ರ ಮೊಮ್ಮಗಳು  ಬೇಬಿ ॥ ಸ್ಮಯ ಹಾಗೂ ಶ್ರೀ ಮೋಹನ್ ಭಂಡಾರಿ ಮತ್ತು ಶ್ರೀಮತಿ ರಮಾ ಮೋಹನ್ ಭಂಡಾರಿ  ಬಾಳೆಹೊನ್ನೂರು ಹಾಗೂ   ಬಂಧು – ಮಿತ್ರರು ಶುಭ ಹಾರೈಸಿದರು.

ದಂಪತಿಗೆ  ಸುಖ ಸಂಪತ್ತು  ಆರೋಗ್ಯ ಭಾಗ್ಯ ನೆಮ್ಮದಿಯ ಜೀವನವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು  ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು .

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *